Tuesday 8 November 2011

Minimum Wages Kannada Renarration

ಕನಿಷ್ಟ ವೇತನ ಕಾಯ್ದೆ


ಮುಖಪುಟ


ಕನಿಷ್ಟ ವೇತನ ಕಾಯ್ದೆ


ವೇತನ ಪರಿಷ್ಕರಣೆ


ಸಂಪರ್ಕ


ವೇತನ ಕಾಯ್ದೆ , ೧೯೪೮ ( ಕ. ವೇ. ಕಾ )


ಕಾ. ಕಾ. ಕನಿಷ್ಟ ವೇತನ ಕಾಯ್ದೆ , ೧೯೪೮ ( ಕ. ವೇ. ಕಾ ) " ಶಾಸನಾತ್ಮಕ ಕನಿಷ್ಟ ವೇತನ " ವೆಂದರೆ ಶಾಸನವು ಸೂಚಿಸಿರುವ ಜೀವನಾಧಾರಕ್ಕಿಂತ ಹೆಚ್ಚಿನದಾದ ಸ್ವಲ್ಪಮಟ್ಟಿನ ಶಿಕ್ಷಣ, ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಒಳಗೊಂಡಿರುವಂತಹ ವೇತನ. ಕಾಯ್ದೆಯಡಿ ಶಾಸನವು ಸೂಚಿಸಿರುವ ವೇತನ ಕಾರ್ಮಿಕರ ಮತ್ತವರ ಕುಟುಂಬಕ್ಕೆ ಜೀವನಾಧಾರವನ್ನು ಒದಗಿಸುವುದಲ್ಲದೆ ಕಾರ್ಮಿಕರಾಗಿ ಅವರ ಸಾಮರ್ಥ್ಯವನ್ನು ಕಾಪಾಡುತ್ತದೆ ಎಂದು ಸುಪ್ರೀಂ ಕೋರ್ಟು ಎತ್ತಿ ಹಿಡಿಯಿತು.


ಕಾಯ್ದೆಯ ಮುಖ್ಯ ಉದ್ದೇಶ ಕಠಿಣ ದುಡಿಮೆಯ ಜೊತೆಗೆ ಅಸಂಘಟಿತ ವಲಯದಲ್ಲಿ ದುಡಿಮೆಯ ಶೋಷಣೆಯನ್ನು ತಡೆಯುವುದಾಗಿತ್ತು. ಕಳೆದ ೧೯೯೪ ಮತ್ತು ೧೯೯೬ರಲ್ಲಿ ಮುಂಬೈ ಮತ್ತು ಕರ್ನಾಟಕ ಹೈಕೋರ್ಟಗಳು ಕನಿಷ್ಟ ವೇತನ ಪಾವತಿಮಾಡದೆ ಇರುವುದು ಸಂವಿಧನದ ೨೩ನೇ ಪರಿಚ್ಛೇದದಲ್ಲಿರುವ ಮೂಲಭುತ ಹಕ್ಕನ್ನು ( ಕೋರ್ಟ ಎಲ್ಲಾ ಮೂಲಭುತ ಹಕ್ಕುಗಳನ್ನು ಜಾರಿಗೊಳಿಸಬಹುದು ) ಉಲ್ಲಂಘಿಸಿದಂತೆ ಎಂದು ತೀರ್ಪು ನೀಡಿವೆ.


ಕಾಯ್ದ್ದೆಯಡಿ ಬರುವ ಸೌಲಭ್ಯಗಳು...


ಈ ಕಾಯ್ದ್ದೆಯಡಿ, ಉಧ್ಯೊಗವನ್ನು ಅಧಿಸೂಚನೆ ಎನೋಟಿಫೈಏಗೊಳಿಸಿದ್ದರೆ, ಕನಿಷ್ಟ ವೇತನ ಪಾವತಿಕಡ್ಡಾಯವಾಗುವುದರ ಜೊತೆಗೆ ಇತರೆ ಹಲವಾರು ಸೌಲಭ್ಯಗಳು ಅವಕಾಶ್ವು ಕಾರ್ಮಿಕರಿಗೆ ಅನ್ವಯವಾಗುತ್ತವೆ.


ಗರಿಷ್ಟ ಕೆಲಸದ ಅವಧಿ ನಿಗದಿಪಡಿಸಬೆಕು.


ಅಧಿಕ ಅವಧಿ ಕೆಲಸಕ್ಕೆ ನಿಗದಿಪಡಿಸಿದ ವೇತನಕ್ಕಿಂತ ಹೆಚ್ಚಿನ ವೇತನ ಪಾವತಿಮಾಡಬೇಕು.


ಪ್ರತಿ ಏಳು ದಿನಗಳ ಕೆಲಸಕ್ಕೆ ಒಂದು ದಿನದ ರಜೆ ನೀಡಬೆಕು.


ಕಾಯ್ದೆಯೊಂದಿಗೆ ಲಗತ್ತಿಸಿರುವ ಪಟ್ಟಿಯಲ್ಲಿ ( ಶೆಡ್ಯೊಲ್ ) ನಮೂದಿಸಲಾದ ಉಧ್ಯೊಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಾಯ್ದೆಯು ಅನ್ವಯವಾಗುತ್ತದೆ. ಈ ಉದ್ಯೋಗಗಳನ್ನು " ಪಟ್ಟಿಯಾದ ಉದ್ಯೋಗಗಳು " ( ಶೆಡ್ಯುಲ್ಡ್ ಎಂಪ್ಲಾಯ್ಮೆಂಟ್ಸ್ ) ಎಂದು ಕರೆಯುತ್ತರೆ. ನಿದಿಷ್ಟ ಉದ್ಯೊಗವನ್ನು ಪಟ್ಟಿಯಲ್ಲಿ ಸೆರಿಸುವ ಅಥವ ಬಿಡುವ ಅಧಿಕಾರ ಇರುವುದು ಸರ್ಕಾರಕ್ಕೆ.. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರ ಕೆಲಸವು ಅಧಿಸೂಚನೆ ಆಗಿರುವ ಉಧ್ಯೊಗವಲ್ಲ.


ಪಟ್ಟಿಯಾದ ಉಧ್ಯೋಗದಲ್ಲಿ ೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದರೆ, ಕಾನೂನಿನ ಪ್ರಕಾರ ಸರ್ಕಾರವು ಆ ಉದ್ಯೋಗವನ್ನು ಅಧಿಸೂಚನೆಗೊಳಿಸಿ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.


ಯುಕ್ತವೆನಿಸಿದಲ್ಲಿ, ಸರ್ಕಾರವು ೧೦೦೦ಕ್ಕಿಂತಲೂ ಕಡಿಮೆ ಕಾರ್ಮಿಕರಿರುವ ಪಟ್ಟಿಯಾದ ಉದ್ಯೋಗಕ್ಕೂ ಕನಿಷ್ಟ ವೇತನವನ್ನು ನಿಗದಿ ಮಾಡಬಹುದು.


ಕಾಯ್ದೆ ಯಾರಿಗೆ ಅನ್ವಯವಾಗುತ್ತದೆ?


ಕನಿಷ್ಟ ವೇತನ ಘೋಷಿಸಬೆಕಾಗಿರುವ ಉದ್ಯೋಗಗಳನ್ನು ತೋರುವ ಚಿತ್ರ


ಪಟ್ಟಿಯಾದ ಉದ್ಯೋಗಗಳು


೧೦೦೦ ಅಥವ ಅದಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಉದ್ಯೋಗಗಳು


ಚಿತ್ರದಲ್ಲಿ ಕಪ್ಪು ಮಾಡಿರುವ ಭಾಗವು ಪಟ್ಟಿಯಾದ ಮತ್ತು ೧೦೦೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರನ್ನು ಒಳಗೊಂಡಿರುವ ಉದ್ಯೊಗಗಳು ಸೂಚಿಸುತ್ತದೆ. ಇವಕ್ಕೆ ಕನಿಷ್ಟ, ವೇತನವನ್ನು ಅಧಿಸೂಚನೆಗೊಳಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಕುರಿತು ಹೈಕೋರ್ಟಿನಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಕರ್ನಾಟಕದಲ್ಲಿ ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಚ್ರಣೆಯಲ್ಲಿರುವುದೇನೆಂದರೆ, ಪಟ್ಟಿಯಾದ ಪ್ರತಿಉದ್ಯೋಗಕ್ಕೂ ಕನಿಷ್ಟ ವೇತನವನ್ನು ಆಥಿಸೂಚನೆಗೊಳಿಸಬೇಕಾಗಿಲ್ಲವೆಂದು. ಉದಾಹರಣೆಗೆ, ಕರ್ನಾಟಕದಲ್ಲಿ ೧೯೯೬ರಲ್ಲಿ ೬೧ ಉದ್ಯೋಗಗಳು ಪಟ್ಟಿಯಲ್ಲಿದ್ದವು., ಅದರಲ್ಲಿ ಕೇವಲ ೩೭ ಉದ್ಯೋಗಗಳಿಗೆ ಮಾತ್ರ ಕನಿಷ್ಟ ವೇತನವನ್ನು ನಿಗದಿ ಮಾಡಲಾಗಿದೆ. ಸಧ್ಯದ ಪರಿಸ್ಥಿತಿತಿಳಿಯಲು ಅನುಬಂಥ ೨ನ್ನು ನೋಡಿ.


Re-narration by Pradeep in Kannada targeting Karnataka for this web page

No comments:

Post a Comment