Tuesday 8 November 2011

Minimumum revision page

ಕನಿಷ್ಟ ವೇತನ ಕಾಯ್ದೆ


ಮುಖಪುಟ


ಕನಿಷ್ಟ ವೇತನ ಕಾಯ್ದೆ


ವೇತನ ಪರಿಷ್ಕರಣೆ


ಸಂಪರ್ಕ


ವೇತನ ಪರಿಷ್ಕರಣೆ


ವೇತನ ಪರಿಶ್ಕರಣೆಯು ಕಾರಣಗಳಿಗೆ ಅವಶ್ಯಕವಾಗಿದೆ. ೧) ಹಣದುಬ್ಭರದಿಂದಾಗಿ ಹಣವು ನಿಜ ಮೌಲ್ಯವನ್ನು ಕಳೆದುಕೊಳ್ಳುವುದನ್ನು ಭರಿಸಲು; ೨) ಅಭಿವೃದ್ಧಿಯ ಫಲವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡಲು.


ಕನಿಷ್ಟ ವೇತನವನ್ನು ಸಮಯದ ಆಧಾರದ ಮೆಲೆ ಅಂದರೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಲಾಯಿತು


ಅಥವ ತಯಾರಿಸಿದ ಪೀಸುಗಳು ಆಧಾರದ ಮೆಲೆ ನಿಗದಿ ಮಾಡಲಾಗುತ್ತದೆಯೆ? (S.(2)(c))


ಎರಡನ್ನೂ ಆಧರಿಸಿ ಮಾಡಲಾಗುತ್ತದೆ. ಯುಕ್ತ ಸರ್ಕಾರಕ್ಕೆ ಈ ಕೆಳಗಿನವುಗಳನ್ನು ನಿಗದಿ ಮಾಡುವ ಆಯ್ಕೆ ಇದೆ.


ಅವಧಿ ಆಧಾರಿತ ಕೆಲಸಗಳ ವೇತನಕ್ಕೆ ಕನಿಷ್ಟ ವೇತನ ಅಥವ


ತಯಾರಿಸಿದ (ಪೀಸ್ ವರ್ಕ್ )18 ವಸ್ತುವನ್ನು ಆಧರಿಸಿ ಕನಿಷ್ಟ ದರ ಜೀವನ ವೆಚ್ಚ ತೂಗಿಸಲು ತುಟ್ಟಿಭತ್ಯೆ ಅವಶ್ಯಕ.


ಪೀಸ್ ವರ್ಕ್ ಆಧಾರದ ಮೆಲೆ ನೇಮಿಸಲಾದ ಕಾರ್ಮಿಕರಿಗೆ ಅವಧಿ ಆಧಿರಿಸಿ ಸಂಭಾವನೆಯನ್ನು ನಿಗದಿ ಮಾಡಬಹುದು ( ಇದನ್ನು ಖಾತ್ರಿಯಾದ ಕೆಲಸದ ಅವಧಿ, ಎಂದು ಕರಿಯಲಾಗುತ್ತದೆ.)


ಯಾವುದು " ಸಾಮಾನ್ಯ ಕೆಲಸದ ದಿನ" ವನ್ನು ರೂಪಿಸಿದೆ ? (S.13)


" ಸಾಮಾನ್ಯ ಕೆಲಸದ ದಿನ " ವನ್ನು ರೂಪಿಸಲು ಬೇಕಾದ ಕೆಲಸದ ಅವಧಿಯನ್ನು ಕಾಯ್ದೆಯು ನಿಗದಿ ಪಡಿಸುತ್ತದೆ. ಈ ರೀತಿ ನಿಗದಿ ಪಡಿಸುವುದರಿಂದ, ಅವಧಿ ಆಧಾರಿತ ಕೆಲಸದಲ್ಲಿ ವೇತನವು, ಇಂತಿಷ್ಟು ಘಂಟೆಗಳ ಕಾಲ ಮಾಡುವ ಅಧಿಕ ಅವಧಿಯನ್ನು ಪರಿಗಣಿಸುವುದು ಸಾಧ್ಯವಾಗುತ್ತದೆ. ಹೀಗಿಲ್ಲದಾಗ, ಕಾರ್ಮಿಕರಿಗೆ ಕನಿಷ್ಟ ವೇತನ ದೊರೆತರೊ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.


ದಿನವೊಂದಕ್ಕೆ ಕೆಲಸದ ಅವಧಿಯು ೯ ಗಂಟೆಗಳನ್ನು ಮೀರಬಾರದು ಮತ್ತು ಇದು ವಿರಾಮವೂ ಸೇರಿದಂತೆ ೧೨ ಗಂಟೆಗಳನ್ನು ಮೀರಬಾರದು.20


ವಾರದ ವಿರಾಮ ದಿನ


ಮಾಲೀಕರು ಬೇರೆ ದಿನವನ್ನು ನಿಗದಿ ಮಾಡಿರುವುದನ್ನು ಹೊರತು ಪಡಿಸಿ, ಪಟ್ಟಿಯಾದ ಉದ್ಯೊಗದಲ್ಲಿನ ಯಾವುದೇ ನೌಕರ ಅಥವ ನೌಕರ ವರ್ಗಕ್ಕೆ ಪ್ರತಿ ೭ ದಿನಗಳ ಅವಧಿಗೆ ಒಂದು ದಿನದ ವಿರಾಮವಿರಬೇಕು. (S.13ರ ಪ್ರಕಾರ, ಇದನ್ನು ಕರ್ನಾಟಕದ ನಿಯಮಗಳ, ನಿಯಮ ೨೪ರೊಂದಿಗೆ ಓದಿಕೊಳ್ಳಬೇಕು. ) ಸಾಮಾನ್ಯವಾಗಿ ಭಾನುವಾರವು ವಿರಾಮದ ದಿನವಾಗಿದೆ.


ಅಧಿಕ ಅವಧಿಯ (O.T) ವೇತನ ( S.14 )


ಕಾಯ್ದೆಯಡಿ ನಿಗದಿಯಾದ ವೆತನವನ್ನು ಪಡೆಯುವ ಕಾರ್ಮಿಕರಿಗೆ ಅದಿಕಾವಧಿ ( ಓ. ಟಿ ) ದರವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಕೆಲಸದ ದಿನವು ಒಳಗೊಂಡಿರುವ ಅವಧಿಗಿಂತ ಹೆಚ್ಚಿನ ಅವಧಿಯ ಕೆಲಸವನ್ನು ಕಾರ್ಮಿಕರು ಮಾಡಿದರೆ, ಆ ಅವಧಿಗೆ ನಿಗದಿಯಾದ ದರವನ್ನು ಮಾಲೀಕರು ನೀಡಬೆಕು. ಈ ದರವನ್ನು ಈ ಕಾಯ್ದೆಯಾನುಸಾರ ಅಥವ ಇನ್ಯಾವುದೇ ಕಾಯ್ದೆಯನುಸಾರ ಯಾವುದು ಹೆಚ್ಚೊ ಅದನ್ನು ಸಂಬಂಧ ಪಟ್ಟ ಸರ್ಕಾರವು ನಿಗದಿಪಡಿಸಬಹುದು. ಮಾಲೀಕರು ಅಧಿಕಾವಧಿ ರಿಜಿಸ್ಟರನ್ನು ಇಡಬೇಕು. ( ರಿಜಿಸ್ಟರಗಾಗಿ ಅನುಭಂಧ ೫ ನೋಡಿ ).


ಸಾಮಾನ್ಯ ಕೆಲಸದ ದಿನಕ್ಕಿಂತ ಕಡಿಮೆ ಇರುವ ಕೆಲಸಕ್ಕೆ ಪಾವತಿಸಬಹುದಾದ ವೇತನ


ನೌಕರರು ಸಾಮಾನ್ಯ ಕೆಲಸದ ದಿನಕ್ಕಿಂತ ಕಡಿಮೆ ಮಾಡಿದರೂ ಪೂರ್ತಿ ದಿನಕ್ಕೆ ನಿಗದಿಯಾದ ವೇತನವನ್ನೇ ಪಡೆಯಬಹುದಗಿದೆ. ವೇತನವನ್ನು ಕೆಲಸ ಮಾಡುವ ಇಚ್ಛೆ ಇಲ್ಲದಿರುವುದಕ್ಕೆ ನೀಡದೇ ಇರಬಹುದೇ ಹೊರತು ಕೆಲಸವಿಲ್ಲ ಎಂಬ ಕಾರಣಕ್ಕಲ್ಲ. ಸ್ವ ಇಚ್ಛ್ಯಿಂದ ಕೆಲಸ ಮಾಡದಿದ್ದ ಪಕ್ಷದಲ್ಲಿ ವೇತನವನ್ನು ಇಳಿಸಬಹುದಾಗಿದೆ.


Re-narration by Pradeep in Kannada targeting Karnataka for this web page

No comments:

Post a Comment