Tuesday 26 April 2011

ಕಾಯ್ದೆಯಡಿ ನಿಗದಿಯಾದ ವೆತನವನ್ನು ಪಡೆಯುವ ಕಾರ್ಮಿಕರಿಗೆ ಅದಿಕಾವಧಿ ( ಓ. ಟಿ ) ದರವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಕೆಲಸದ ದಿನವು ಒಳಗೊಂಡಿರುವ ಅವಧಿಗಿಂತ ಹೆಚ್ಚಿನ ಅವಧಿಯ ಕೆಲಸವನ್ನು ಕಾರ್ಮಿಕರು ಮಾಡಿದರೆ, ಆ ಅವಧಿಗೆ ನಿಗದಿಯಾದ ದರವನ್ನು ಮಾಲೀಕರು ನೀಡಬೆಕು. ಈ ದರವನ್ನು ಈ ಕಾಯ್ದೆಯಾನುಸಾರ ಅಥವ ಇನ್ಯಾವುದೇ ಕಾಯ್ದೆಯನುಸಾರ ಯಾವುದು ಹೆಚ್ಚೊ ಅದನ್ನು ಸಂಬಂಧ ಪಟ್ಟ ಸರ್ಕಾರವು ನಿಗದಿಪಡಿಸಬಹುದು. ಮಾಲೀಕರು ಅಧಿಕಾವಧಿ ರಿಜಿಸ್ಟರನ್ನು ಇಡಬೇಕು. ( ರಿಜಿಸ್ಟರಗಾಗಿ ಅನುಭಂಧ ೫ ನೋಡಿ )

ನೌಕರರು ಸಾಮಾನ್ಯ ಕೆಲಸದ ದಿನಕ್ಕಿಂತ ಕಡಿಮೆ ಮಾಡಿದರೂ ಪೂರ್ತಿ ದಿನಕ್ಕೆ ನಿಗದಿಯಾದ ವೇತನವನ್ನೇ ಪಡೆಯಬಹುದಗಿದೆ. ವೇತನವನ್ನು ಕೆಲಸ ಮಾಡುವ ಇಚ್ಛೆ ಇಲ್ಲದಿರುವುದಕ್ಕೆ ನೀಡದೇ ಇರಬಹುದೇ ಹೊರತು ಕೆಲಸವಿಲ್ಲ ಎಂಬ ಕಾರಣಕ್ಕಲ್ಲ. ಸ್ವ ಇಚ್ಛ್ಯಿಂದ ಕೆಲಸ ಮಾಡದಿದ್ದ ಪಕ್ಷದಲ್ಲಿ ವೇತನವನ್ನು ಇಳಿಸಬಹುದಾಗಿದೆ.

No comments:

Post a Comment